ಅಭಿಪ್ರಾಯ / ಸಲಹೆಗಳು

ಸಾಮಾಜಿಕ ಹೊಣೆಗಾರಿಕೆ (CSR) ಕಾರ್ಯನೀತಿ

  1. ಪರಿಚಯ:

ಫೆಬ್ರವರಿ 2014 ರಲ್ಲಿ ಕೇಂದ್ರ ಸರ್ಕಾರವು ಕಂಪನಿಯ ಕಾಯ್ದೆ, 2013 ಮತ್ತು ಅದರ ಅಡಿಯಲ್ಲಿ ನಿಯಮಗಳನ್ನು ಜಾರಿಗೆ ತಂದಿರುತ್ತದೆ. ಅದರ ಅನ್ವಯ, ಭಾರತೀಯ ಕಂಪನಿಗಳು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (CSR) ಕಾರ್ಯನೀತಿಯನ್ನು ಕಂಪನಿ ಕಾಯ್ದೆ, 2013 ರ ಕಲಂ 135 ರ ಅನ್ವಯ ಔಪಚಾರಿಕವಾಗಿ ಪ್ರಸ್ತಾಪಿಸಿರುವ ನೀತಿಯನ್ನು ಅಳವಡಿಸಿಕೊಳ್ಳಲೇಬೇಕಾಗಿದೆ. ಸಾಂಸ್ಥಿಕ ವ್ಯವಹಾರಗಳ ಮಂತ್ರಾಲಯವು ಹೊರಡಿಸಿರುವ ಅಧಿಸೂಚನೆ ಸಂಖ್ಯೆ.1/15/2013-CL-V, ದಿನಾಂಕ: 27-02-2014 ರಂತೆ ಕಂಪನಿಗಳು ಅಳವಡಿಸಿಕೊಳ್ಳಬೇಕಾದ CSR ನೀತಿಯ ಮಾರ್ಗಸೂಚಿಗಳನ್ನು ದಿನಾಂಕ: 01-04-2014 ರಿಂದ ಜಾರಿಗೆ ಬರುವಂತೆ ಅಳವಡಿಸಿಕೊಳ್ಳುವ ಅವಶ್ಯಕತೆಯಿರುತ್ತದೆ. ಈ ಮೇಲಿನ ಹಿನ್ನೆಲೆಯಲ್ಲಿ, ಸರ್ಕಾರದ ಈ ಮಾರ್ಗಸೂಚಿಗಳನ್ನು ಪರಿಪಾಲಿಸಬೇಕಾಗಿರುತ್ತದೆ

  1. ಕೆ.ಎಸ್.ಡಿ.ಎಲ್. ಗುರಿ ( MISSION OF KS&DL ) :

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್, (ಕೆ.ಎಸ್.ಡಿ.ಎಲ್.) ಕಂಪನಿಯ ಸರ್ವಾಂಗೀಯ ಬೆಳವಣಿಗೆಯ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರುತ್ತದೆ. ದೃಷ್ಟಿಕೋನ-2014 ರ ಮೂಲಕ ಗುರಿ ಮತ್ತು ಅದನ್ನು ಸಾಧಿಸಲು ಅನುಸರಿಸಬೇಕಾದ ತಂತ್ರಗಳು ಮತ್ತು ಕಾರ್ಯನೀತಿಯನ್ನು ಸೂಚಿಸಲಾಗಿದೆ. ಕೆ.ಎಸ್.ಡಿ.ಎಲ್.ನ ದೃಷ್ಟಿಕೋನವನ್ನು ಈ ಕೆಳಗಿನ ಹೇಳಿಕೆಯ ಮೂಲಕ ರೂಪ ಕೊಡಲಾಗಿದೆ:

ಕೆ.ಎಸ್.ಡಿ.ಎಲ್. ದೃಷ್ಟಿಕೋನವು ಹೊಸ ಸಾಬೂನು ಉತ್ಪಾದನಾ ತಂತ್ರಜ್ಞಾನವನ್ನು ಮತ್ತು ಮಾಹಿತಿ ತಂತ್ರಜ್ಞಾನವನ್ನು ವೃತ್ತಿಪರ ಆಡಳಿತ ಕಾರ್ಯನೀತಿಯನ್ನು ಒಳಗೊಂಡು, ಪಾರದರ್ಶಕತೆ, ವ್ಯವಹಾರಗಳ ಕಾರ್ಯಾಚರಣೆಯನ್ನು ಅಭಿವೃದ್ಧಿಪಡಿಸುವುದು ಮತ್ತು ವಾಣಿಜ್ಯ ಮತ್ತ್ತು ಭಾರತದ ಮಾರುಕಟ್ಟೆಯಲ್ಲಿ ತ್ವರಿತಗತಿಯಲ್ಲಿ ಮಾರಾಟವಾಗುವ ಗ್ರಾಹಕ ಸರಕುಗಳ (FMCG) ಕ್ಷೇತ್ರದಲ್ಲಿ ಆಧುನಿಕ ವೃತ್ತಿಪರ ತಂತ್ರಜ್ಞಾನವನ್ನು ಅಳವಡಿಸುವತ್ತ ಬದಲಾವಣೆಯ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳ ಮೂಲಕ ಸುಗಂಧವನ್ನು ಪಸರಿಸುವುದಾಗಿರುತ್ತದೆ.”

ಕೆ.ಎಸ್.ಡಿ.ಎಲ್.ನ CSR ಬದ್ಧತೆಯು ಅದರ ಸಾಮಾಜಿಕ ಮತ್ತು ಪರಿಸರ ಪ್ರಜ್ಞೆಯನ್ನು ಅದರ ಆಂತರಿಕ ವ್ಯಾಪಾರ ನೀತಿಯಲ್ಲಿ ಒಂದು ಭಾಗವಾಗಿ ಅಳವಡಿಸಿಕೊಂಡಿದೆ ಮತ್ತು ಅದರ ಬದ್ಧತೆಯು ಎಲ್ಲಾ ಪಾಲುದಾರರು ಗ್ರಾಹಕರನ್ನು ಒಳಗೊಂಡಂತೆ, ಶೇರುದಾರರು, ಉದ್ಯೋಗಿಗಳು, ಸ್ಥಳೀಯ ಸಮುದಾಯ ಮತ್ತು ಪ್ರಮುಖವಾಗಿ ಸಮಾಜವನ್ನು ಒಳಗೊಂಡಿರುತ್ತದೆ.

  1. ಕಾರ್ಯನೀತಿಯ ಹೇಳಿಕೆ (POLICY STATEMENT):

ಕೆ.ಎಸ್.ಡಿ.ಎಲ್.ನ ಕಾರ್ಯನೀತಿಯು ಸಾಧನೆಯ ಗುರಿಯು ಸಾಂದ್ರತೆ ಮತ್ತು ಒಳ್ಳೆಯ ಸಾಂಸ್ಥಿಕ ಆಡಳಿತ ಒಳಗೊಂಡು ಪರಿಸರದ ಜವಾಬ್ದಾರಿ, ವ್ಯಾಪಾರ ಪದ್ಧತಿ ಮತ್ತು ಆರ್ಥಿಕ ಲಾಭದ ಸಮತೋಲನ ಹಾಗೂ ಸಮಾಜದ ಒಳಿತನ್ನು ಗಮನದಲ್ಲಿರಿಸಲಾಗಿದೆ. ಕೆ.ಎಸ್.ಡಿ.ಎಲ್. ಸಂಸ್ಥೆಯು ಸ್ಥಳೀಯ ಸಮುದಾಯ ಮತ್ತು ಪ್ರಮುಖವಾಗಿ ಸಮಾಜದ ಒಳಿತಿಗೆ ಕಟಿಬದ್ಧವಾಗಿರುತ್ತದೆ.

CSR ಕಾರ್ಯಕ್ರಮಗಳನ್ನು ಪ್ರಾಥಮಿಕವಾಗಿ ಜಾರಿಗೊಳಿಸುವ ವಲಯಗಳು ಕಂಪನಿಯ ಕಾರ್ಯಾಚರಣೆಯ ಸುತ್ತಮುತ್ತಲಿನ ಪ್ರದೇಶವನ್ನು ಒಳಗೊಂಡಿರುತ್ತದೆ. ಇದರಿಂದಾಗಿ ಅವುಗಳ ಮೇಲ್ವಿಚಾರಣೆ ಮತ್ತು ಗರಿಷ್ಠ ಅಭಿವೃದ್ಧಿ ಮತ್ತು ಅಗತ್ಯವಿರುವ ಸಾಮಥ್ರ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಫಲಾನುಭವಿಗಳ ಸ್ವಾವಲಂಬನೆಯನ್ನು ಮೂಲದಲ್ಲಿ ಬಲಪಡಿಸುವುದು ಹಾಗೂ ಪ್ರಮುಖವಾಗಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಯಿಂದ ಸಾಮಾಜಿಕ ಮತ್ತು ಅವರ ಆರ್ಥಿಕ ಅಭಿವೃದ್ಧಿ ಹೊಂದಲು ಪೂರ್ವಾಪೇಕ್ಷಿತವೆಂದು ನಂಬಲಾಗಿದೆ.

  1. ಗುರಿ ಮತ್ತು ಉದ್ದೇಶಗಳು (GOAL & OBJECTIVE):

ಇದರ ಮೂಲ ಉದ್ದೇಶವು ಸಮರ್ಥನೀಯ ಪ್ರಚಾರ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಜವಾಬ್ದಾರಿಯುತ ಸಾಂಸ್ಥಿಕ ಪ್ರಜೆಯನ್ನಾಗಿ ಮಾಡುವುದಾಗಿರುತ್ತದೆ. ಈ ಕೆಳಕಂಡ ವಿಶಾಲ ಉದ್ದೇಶಗಳ ಮೂಲಕ ಗುರಿಯನ್ನು ಸಾಧಿಸಲಾಗುವುದು:

  1. ಸಮಗ್ರ ಮತ್ತು ಸಂಯೋಜಿತ ಸಮುದಾಯ ಅಭಿವೃದ್ಧಿಯಲ್ಲಿ ಗಮನದಲ್ಲಿರಿಸುವುದು ಆದರೆ, ಕಸಾಮಾನಿಯ ಸುತ್ತಮುತ್ತಲಿನಲ್ಲಿರುವ ಪ್ರದೇಶಗಳು ಹಾಗೂ ಅದರ ಶಾಖಾ ಕಛೇರಿಯ ಪ್ರದೇಶಗಳಲ್ಲಿ ನೇರವಾಗಿ ಪ್ರಭಾವ ಬೀರುವ ಸಮುದಾಯಗಳನ್ನು ಮಾತ್ರ ಸೀಮಿತಗೊಳಿಸಬಾರದು.
  2. ನವೀನ ಮತ್ತು ಸಮರ್ಥನೀಯ ಪರಿಸರ ಸಂರಕ್ಷಣೆಯ ಪರಿಹಾರಗಳು.
  3. ಆದ್ಯತೆ ಮತ್ತು ಪೂರ್ಣ ಪ್ರಮಾಣದ ಸಮಗ್ರ ಪರಿಸರ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಯೋಜನೆ, ವಿನ್ಯಾಸ ಮತ್ತು ಮೂಲ ಸೌಕರ್ಯ ಅಭಿವೃದ್ಧಿಯ ಅನುಷ್ಠಾನ.
  4. ಸುಧಾರಿತ ಸಾಂಪ್ರದಾಯಿಕ ಹಾದಿ, ಅಸಾಂಪ್ರದಾಯಿಕ ಮತ್ತು ದುರ್ಬಲ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ವೃತ್ತಿಪರ ಶಿಕ್ಷಣ ನೀಡುವತ್ತ ಗಮನ ಹರಿಸುವುದು.
  5. ರಾಷ್ಟ್ರೀಯ ಮತ್ತು ಸ್ಥಳೀಯವಾಗಿ ಪರಿಹಾರ ನೀಡುವುದು / ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಅಗತ್ಯಕ್ಕನುಗುಣವಾಗಿ ಪರಿಹಾರ/ಕೊಡುಗೆಗಳನ್ನು ನೀಡುವುದು.
  6. ಕ್ರೀಡಾ ಪ್ರತಿಭೆಗಳ ಅಭಿವೃದ್ಧಿಗೆ ಮತ್ತು ಪ್ರಚಾರಕ್ಕಾಗಿ ಸಹಕಾರ ನೀಡುವುದು.
  7. ಜಾರಿಯಲ್ಲಿರುವ ಆರೋಗ್ಯಾಭಿವೃದ್ಧಿ ಮತ್ತು ಸುರಕ್ಷಿತ ಕಾರ್ಯಕ್ಷೇತ್ರಗಳು ಮತ್ತು ಗುತ್ತಿಗೆ ಕಾರ್ಮಿಕರ ಯೋಗಕ್ಷೇಮದ ಬಗ್ಗೆ ಕಾಳಜಿ.
  8. ಪ್ರಕೃತಿ ವಿಕೋಪಗಳ ನಿರ್ವಹಣೆಯ ಉಪಕ್ರಮಗಳಲ್ಲಿ ಮತ್ತು ಅದರ ತಡೆಗಟ್ಟುವಿಕೆ ಮತ್ತು ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಕೆ.ಎಸ್.ಡಿ.ಎಲ್ ಸಂಸ್ಥೆಯ ತುಲನಾತ್ಮಕ ಶಕ್ತಿಯ ಆಧಾರದ ಸಕ್ರಿಯವಾಗಿ ಭಾಗವಹಿಸುವುದು.
  9. ಚಟುವಟಿಕೆಗಳು/CSR ಅಡಿಯಲ್ಲಿ ಗಮನಿಸಬಹುದಾದ ಕ್ಷೇತ್ರಗಳು (ACTIVITIES/AREAS OF FOCUS UNDER CSR):

ಕಾಯ್ದೆಯ ಒಟ್ಟಾರೆ ನಿಬಂಧನೆಗಳ ಅಡಿಯಲ್ಲಿ ಕಂಪನಿಯು CSR ಯೋಜನೆಯಡಿಯಲ್ಲಿ ಗಮನಿಸಬಹುದಾದ ಕ್ಷೇತ್ರಗಳು ಮತ್ತು ಅನುಸೂಚಿ 7 ರ ಅಡಿಯಲ್ಲಿ ಇತರ ವಿಷಯಗಳನ್ನು ಒಳಗೊಂಡಂತೆ ಚಟುವಟಿಕೆಗಳು:

  1. ಸಾಕ್ಷರತೆ/ವಿದ್ಯೆ/ಸಾಂಸ್ಕøತಿಕ ಅಭಿವೃದ್ಧಿ
  2. ಸುರಕ್ಷಿತ ಕುಡಿಯುವ ನೀರು/ಆರೋಗ್ಯ/ನೈರ್ಮಲೀಕರಣ
  3. ಕುಶಲ ಕಲೆಗಳ ಅಭಿವೃದ್ಧಿ ಮೂಲಕ ಜೀವನಾವಶ್ಯಕ ಸಮರ್ಥನೀಯ ಆಧಾಯವನ್ನು ಗಳಿಸುವುದು.
  4. ಸಮರ್ಥನೀಯ ಪರಿಸರವನ್ನು ಮತ್ತು ಕೃಷಿ ಆರಣ್ಯ ಖಚಿತಗೊಳಿಸುವುದು.
  5. ಹಸಿವು ಬಡತನ ಮತ್ತು ಅಪೌಷ್ಠಿಕತೆ ನಿರ್ಮೂಲನೆ ಮಾಡುವುದು.
  6. ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣ ಪ್ರಚಾರ.
  7. ವೃದ್ಧಾಶ್ರಮಗಳು/ಹಿರಿಯ ನಾಗರಿಕರು ಮತ್ತು ಅನಾಥರ ಆರೈಕೆ ಕೇಂದ್ರಗಳು.
  8. ಸಾಂಪ್ರದಾಯಿಕವಲ್ಲದ ಶಕ್ತಿ ಬಳಕೆಯ ಪ್ರಚಾರ.
  9. ನೀರಿನ ಕೊಯ್ಲು ಮತ್ತು ಅದರ ಸಂರಕ್ಷಣಾ ವಿಧಾನಗಳಿಗೆ ಉತ್ತೇಜನ ನೀಡುವುದು.
  10. ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳ ಮತ್ತು ಸಮಾಜದ ಸವಲತ್ತುಗಳಿಂದ ವಂಚಿತರಾದ ಮಕ್ಕಳಿಗೆ ಸಹಾಯ.
  11. ಸಮಾಜದ ಕೆಟ್ಟ ಅಭ್ಯಾಸಗಳಾದ ಕುಡಿತದ ಚಟ, ಏಡ್ಸ್ ಇತ್ಯಾದಿಗಳ ಬಗ್ಗೆ ಹಾಗೂ ಕಾನೂನು ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಜನ ಜಾಗೃತಿ ಕಾರ್ಯಕ್ರಮಗಳ ಮೂಲಕ ಪ್ರಚಾರ ಮಾಡುವುದು.
  12. ನೈಸರ್ಗಿಕ ವಿಕೋಪಗಳು ಅಂದರೆ ಪ್ರವಾಹ, ಭೂಕಂಪ ಮತ್ತು ಸಾಂಕ್ರಮಿಕ ರೋಗ ಇತ್ಯಾದಿಗಳಿಗೆ ಬಲಿಯಾದವರಿಗೆ ಸಹಾಯ.
  13. ಸಾಂಸ್ಕ್ಯತಿಕ, ಸಾಮಾಜಿಕ ಮತ್ತು ಕ್ರೀಡಾ ಚಟುವಟಿಕೆಗಳ ಬಗ್ಗೆ ಉತ್ತೇಜನ ನೀಡುವುದು
  14. ರಾಷ್ಟ್ರೀಯ ಪರಂಪರೆ, ಕಲೆ ಮತ್ತು ಸಾಂಸ್ಕøತಿಕ ಮತ್ತು ಸಾರ್ವಜನಿಕ ಗ್ರಂಥಾಲಯಗಳನ್ನು ಕಾಪಾಡುವುದು.
  15. ಗ್ರಾಮೀಣ ಅಭಿವೃದ್ಧಿ ಯೋಜನೆಗಳು ಅಂದರೆ ರಸ್ತೆ, ಸೇತುವೆ, ಸಮುದಾಯ ಭವನಗಳು ಮತ್ತು ಇತರ ನಾಗರಿಕ ಸೌಲಭ್ಯಗಳಿಗೆ ಉತ್ತೇಜನ ನೀಡುವುದು.

ಮೇಲೆ ತಿಳಿಸಿರುವ ಚಟುವಟಿಕೆ/ಗಮನಿಸಬಹುದಾದ ಪ್ರದೇಶಗಳು ಕೇವಲ ನಮೂನೆಗಳು ಮಾತ್ರ ಮತ್ತು ಅವುಗಳು ಸಮಗ್ರವಾಗಿರುವುದಿಲ್ಲ, ಮೇಲೆ ತಿಳಿಸಿದ ಯಾವುದೇ ಅಂಶಗಳಲ್ಲಿ ಸೇರ್ಪಡೆಯಾಗದಿದ್ದರೆ ಮತ್ತು ಕಂಪನಿಯ ಕಾಯ್ದೆಯ ನಿಬಂಧನೆಗಳಲ್ಲಿ ಒಳಪಟ್ಟಿದ್ದರೆ ಭವಿಷ್ಯದಲ್ಲಿ ಅಗತ್ಯವಿದ್ದರೆ ಅವುಗಳನ್ನು ಸೇರಿಸಿಕೊಳ್ಳಬಹುದು.

  1. CSR ಅಳವಡಿಕೆ ಮತ್ತು ಸಮಿತಿಯ ರಚನೆ (APPLICABILITY OF CSR AND CONSTITUTION OF A COMMITTEE) :

ಕಂಪನಿಯ ಯಾವುದೇ ಆರ್ಥಿಕ ವರ್ಷದಲ್ಲಿ ನಿವ್ವಳ ಮೌಲ್ಯ ರೂ.500/- ಕೋಟಿಗಳು ಅಥವಾ ಅಧಿಕ ಅಥವಾ ವಹಿವಾಟು ರೂ.1000/- ಕೋಟಿಗಳು ಅಥವಾ ಅಧಿಕ ಅಥವಾ ನಿವ್ವಳ ಲಾಭ ರೂ.5.00 ಕೋಟಿ ಅಥವಾ ಅಧಿಕವಾಗಿದ್ದರೆ ನಿರ್ದೇಶಕರ ಮಂಡಳಿಯ CSR ಸಮಿತಿಯನ್ನು ರಚಿಸಬೇಕಾಗಿರುತ್ತದೆ ಮತ್ತು ಅದರ ಹಿಡುವಳಿಗಳು ಅಥವಾ ಅಂಗಸಂಸ್ಥೆಗಳು ಮತ್ತು ವಿದೇಶಿ ಕಂಪನಿಗಳ ಶಾಖೆಗಳು ಅಥವಾ ಯೋಜನಾ ಕಛೇರಿಗಳು ಭಾರತದಲ್ಲಿ ಇದ್ದರೆ ಈ ಸಮಿತಿಯನ್ನು ರಚಿಸಲೇಬೇಕಾಗಿರುತ್ತದೆ. ಕೆ.ಎಸ್.ಡಿ.ಎಲ್ ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ರಮಗಳ ಕುರಿತಂತೆ ಇದರ ಮೇಲ್ವಿಚಾರಣೆಯನ್ನು ಕೆ.ಎಸ್.ಡಿ.ಎಲ್.ನ ಅಧ್ಯಕ್ಷರ ಆಶ್ರಯದ ಅಡಿಯಲ್ಲಿ ರಚಿಸಲಾಗಿರುವ CSR ಸಮಿತಿಯು ನೋಡಿಕೊಳ್ಳುವುದು. ಅದರಂತೆ, ಕೆ.ಎಸ್.ಡಿ.ಎಲ್.ನ ಅಧ್ಯಕ್ಷರು ಹಿರಿಯ ಆಡಳಿತ ವರ್ಗದೊಂದಿಗೆ ಸಮಾಲೋಚಿಸಿ ಈ ಕೆಳಕಂಡ ಪ್ರತಿನಿಧಿಗಳನ್ನೊಳಗೊಂಡ CSR ಸಮಿತಿಯನ್ನು ರಚಿಸಿರುತ್ತಾರೆ:

1.

ಶ್ರೀ. ಮಹೇಶ್‌ ಬಿ. ಶಿರೂರ್, ಐ.ಎಫ್‍.ಎಸ್., ವ್ಯವಸ್ಥಾಪಕ ನಿರ್ದೇಶಕರು

– ಅಧ್ಯಕ್ಷರು

2.

ಶ್ರೀ. ಎಲ್.‌ ಚಂದ್ರಶೇಖರ್‌ ನಾಯಕ್,‌ ಐ.ಎ.ಎಸ್.‌, ಮಂಡಳಿಯ ನಿರ್ದೇಶಕರು

– ಸದಸ್ಯರು

3.

ಶ್ರೀಮತಿ ಎನ್‌. ಆರ್.‌ ಜಗನ್ಮಾತ, ಮಂಡಳಿಯ ನಿರ್ದೇಶಕರು

– ಸದಸ್ಯರು

CSR ಸಮಿತಿಯು;

  1. ಕಂಪನಿಯ ಕಾಯ್ದೆ 2013 ರ ಅನುಸೂಚಿ 7 ರಲ್ಲಿ ತಿಳಿಸಿರುವಂತೆ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿಯನ್ನು ಕಾರ್ಖಾನೆಯಲ್ಲಿ ರೂಪಿಸುವ ಮತ್ತು ಮಂಡಳಿಗೆ ಶಿಫಾರಸ್ಸು ಮಾಡುವುದು ಮತ್ತು ಅದರ ಚಟುವಟಿಕೆಗಳನ್ನು ಕೈಗೊಳ್ಳುವುದು.
  2. ಅಂಶ (a) ರಲ್ಲಿ ಸೂಚಿಸಿರುವ ಚಟುವಟಿಕೆಗಳಿಗೆ ತಗಲುವ ವೆಚ್ಚದ ಮೊತ್ತವನ್ನು ಶಿಫಾರಸ್ಸು ಮಾಡುವುದು; ಮತ್ತು
  3. ಕಾಲಕಾಲಕ್ಕೆ ಕಂಪನಿಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿಯ ಮೇಲ್ವಿಚಾರಣೆ ನೋಡಿಕೊಳ್ಳುವುದು.
  4. ಯೋಜನೆಯ ಮೇಲ್ವಿಚಾರಣಾ ಘಟಕ/ಸಂಸ್ಥೆಯ ಯಾಂತ್ರಿಕ ವ್ಯವಸ್ಥೆ (PROJECT MONITORING UNIT/ORGANIZATION MECHANISM) :

ಕಂಪನಿಯು ಕೆಳಕಂಡ ಅಧಿಕಾರಿಗಳನ್ನೊಳಗೊಂಡ ಯೋಜನೆಯ ಮೇಲ್ವಿಚಾರಣಾ ಘಟಕವನ್ನು ಸ್ಥಾಪಿಸಿರುತ್ತದೆ:

a.

ಪ್ರಧಾನ ವ್ಯವಸ್ಥಾಪಕರು (ಹಣಕಾಸು)

- ಅಧ್ಯಕ್ಷರು

b.

ಪ್ರಧಾನ ವ್ಯವಸ್ಥಾಪಕರು (ಉ&ನಿ)

- ಸದಸ್ಯರು

c.

ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ)

- ಸದಸ್ಯರು

CSR ಅಡಿಯಲ್ಲಿ ಬಿಡುಗಡೆಯಾಗಿರುವ ಹಣದ ಬಗ್ಗೆ ಈ ಮೇಲ್ವಿಚಾರಣಾ ಘಟಕವು ನಿಯಮಿತ ಅವಧಿಯಲ್ಲಿ ಮೇಲ್ವಿಚಾರಣೆಯನ್ನು ನಡೆಸಬೇಕು ಮತ್ತು ಯೋಜನೆ/ಕಾರ್ಯಕ್ರಮಗಳು/ಚಟುವಟಿಕೆಗಳ ಜಾರಿ ಕುರಿತಂತೆ ಭೌತಿಕ ಮತ್ತು ಆರ್ಥಿಕ ಪ್ರಗತಿ ಕುರಿತಂತೆ ಸಿ.ಎಸ್.ಆರ್ ಸಮಿತಿಗೆ ವರದಿ ಸಲ್ಲಿಸುವುದು.

  1. ನಿರ್ದೇಶಕರ ಮಂಡಳಿ:

CSR ಸಮಿತಿಯ ಶಿಫಾರಸ್ಸುಗಳನ್ನು ನಿರ್ದೇಶಕರ ಮಂಡಳಿಯು ಪರಿಗಣಿಸಿ ಕಂಪನಿಯ CSR ನೀತಿಯನ್ನು ಅನುಮೋದಿಸುವುದು ಮತ್ತು ನೀತಿಯ ವಿವರಗಳನ್ನು ಅದರ ಸದಸ್ಯರಿಗೆ ವರದಿ ಮಾಡುವುದು ಮತ್ತು ಅದನ್ನು ಕಂಪನಿಯ ಅಂರ್ತಜಾಲದಲ್ಲಿ ಪ್ರಕಟಿಸುವುದು. ನಿರ್ದೇಶಕರ ಮಂಡಳಿಯು ಸಂಬಂಧಿಸಿದ ಆರ್ಥಿಕ ವರ್ಷದಲ್ಲಿ ಕಂಪನಿಯು ಸಿ.ಎಸ್.ಆರ್ ನೀತಿ ನಿಯಮಗಳಂತೆ ಜಾರಿಗೊಳಿಸಿ ಚಟುವಟಿಕೆಗಳನ್ನು ನಡೆಸಿರುವ ಬಗ್ಗೆ ಖಾತ್ರಿ ಪಡಿಸಬೇಕು ಮತ್ತು ಕಂಪನಿಯ ಖಾಯಿದೆಯ ಒಟ್ಟು ಉಪಬಂಧಗಳಂತೆ ಇದೆ ಎಂಬುದನ್ನು ದೃಢಪಡಿಸಬೇಕು

ಅದರಂತೆ ನಿರ್ದೇಶಕರ ಮಂಡಳಿಯು ಕ್ರಮವಾಗಿ ದಿನಾಂಕ: 29.3.2014 ಮತ್ತು 28.10.2014 ರಂದು ನಡೆದ 224 & 225 ನೇ ಮಂಡಳಿಯ ಸಭೆಯಲ್ಲಿ ಚರ್ಚಿಸಿರುತ್ತದೆ. ಚರ್ಚೆಯ ನಂತರ ನಿರ್ದೇಶಕರ ಮಂಡಳಿಯು ಕೆ.ಎಸ್.ಡಿ.ಎಲ್.ನ CSR ನೀತಿಯನ್ನು ಅನುಮೋದಿಸಿರುತ್ತದೆ ಮತ್ತು ಕೆ.ಎಸ್.ಡಿ.ಎಲ್ ಸಂಸ್ಥೆಯ CSR ಟ್ರಸ್ಟ್ ಅನ್ನು ಸ್ಥಳೀಯ ಉಪ-ನೋಂದಣಾಧಿಕಾರಿಗಳಲ್ಲಿ ನೋಂದಾಯಿಸಲು ಅನುಮತಿಸಿರುತ್ತದೆ.

  1. ಹಣದ ಹಂಚಿಕೆ (Allocation of funds)

ಹಣದ ಹಂಚಿಕೆಯ ವಿಷಯದಲ್ಲಿ ಈ ಕೆಳಕಂಡ ಕಾರ್ಯನೀತಿ ವಿಧಾನವನ್ನು ಅನುಸರಣೆ ಮಾಡಬೇಕಾಗಿರುತ್ತದೆ.

  1. MCA ಯು ರೂಪಿಸಿರುವ ಮಾರ್ಗಸೂಚಿಗಳಂತೆ CSR ಮುಂಗಡ ಪತ್ರದಲ್ಲಿ ನಿಗಧಿಪಡಿಸುವ ಮೊತ್ತವು ಹಿಂದಿನ ವಾರ್ಷಿಕ ವರ್ಷದಲ್ಲಿ ಕಂಪನಿಯು ಗಳಿಸಿರುವ ನಿವ್ವಳ ಲಾಭಾಂಶದ ಮೇಲೆ ಶೇಕಡ 2 ರಷ್ಟು ಇರಬೇಕಾಗುತ್ತದೆ ಮತ್ತು ಇದಕ್ಕೆ ಕೆ.ಎಸ್.ಡಿ.ಎಲ್.ನ ನಿರ್ದೇಶಕರ ಮಂಡಳಿಯ ಅನುಮೋದನೆ ಪಡೆಯಬೇಕಾಗಿರುತ್ತದೆ.
  2. ಸದರಿ ಹಣವನ್ನು ಹೊಸದಾಗಿ ರಚಿಸಲಾಗಿರುವ ಕೆ.ಎಸ್.ಡಿ.ಎಲ್.ನ ಅವಧಿ ಮೀರಿದರೂ ಸ್ಥಗಿತವಾಗದ ನಿಧಿಗೆ ವರ್ಗಾವಣೆ ಮಾಡಬೇಕು ಮತ್ತು ಈ ಹಣವನ್ನು ಸಂಸ್ಥೆಯಿಂದ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲು ಯೋಜಿಸಲಾಗಿರುವ ಸಂಸ್ಥೆಗಳಿಗೆ ವರ್ಗಾಯಿಸಬೇಕು ಮತ್ತು ಅ ಸಂಸ್ಥೆಗಳ ಅನುಮೋದಿತ ವಾರ್ಷಿಕ ಯೋಜನೆಗಳ ಅಧಾರದ ಮೇಲೆ ಇವುಗಳನ್ನು ಕಾರ್ಯಗತಗೊಳಿಸಬೇಕು.
  3. CSR ಸಮಿತಿಯು ಅವಶ್ಯವಿರುವ ಲೆಕ್ಕಪರಿಶೋಧನೆಯ ಜವಾಬ್ದಾರಿಯನ್ನು ಹೊಂದಿರುತ್ತದೆ ಮತ್ತು CSR ಚಟುವಟಿಕೆಗಳಿಗೆ ಸಂಬಂಧಿಸಿದ ಇತರೆ ವಿಷಯಗಳ ಬಗ್ಗೆ ಅನುಭವವುಳ್ಳ ನುರಿತರನ್ನು ಸೇರಿಸಿಕೊಂಡು ಲೆಕ್ಕ ಪರಿಶೋಧನೆಯನ್ನು ನಡೆಸಬೇಕು.
  4. ಹಿಂದಿನ ವರ್ಷದಲ್ಲಿ ಬಳಕೆಯಾಗದ ಹಣ ಯಾವುದಾದರೂ ಇದ್ದರೆ ಅದನ್ನು ಮುಂದಿನ ವರ್ಷದ ಮುಂಗಡ ಪತ್ರದಲ್ಲಿ ವರ್ಗಾಯಿಸಿ ಸೇರಿಸಬೇಕಾಗುತ್ತದೆ.
  5. CSR ಆಡಳಿತ ಮತ್ತು ವೆಚ್ಚ (CSR GOVERNANCE & EXPENDITURE ):
  6. ಪ್ರತಿ ವರ್ಷ CSR ಮತ್ತು ಯೋಜನೆ ನಿರ್ವಹಣ ಸಮಿತಿಯು ಆ ಆರ್ಥಿಕ ವರ್ಷದಲ್ಲಿ ತೆಗೆದುಕೊಳ್ಳಬಹುದಾದ CSR ಯೋಜನೆಯನ್ನು ಹಾಗೂ CSR ಕಾರ್ಯಕ್ರಮಗಳನ್ನು ನಿರ್ದೇಶಕರ ಮಂಡಳಿಯ ಒಪ್ಪಿಗೆಗಾಗಿ ಮಂಡಿಸಬೇಕು ಮತ್ತು ಅದರ ಮೇಲಿನ ಮುಂಗಡಪತ್ರದಲ್ಲಿ ತೋರಿಸಬೇಕು. ನಿರ್ದೇಶಕರ ಮಂಡಳಿಯು CSR ಯೋಜನೆಯನ್ನು ಯಾವುದಾದರೂ ತಿದ್ದುಪಡಿ ಅವಶ್ಯಕವಿದ್ದರೆ ಅದಕ್ಕೆ ಅನುಮೋದನೆ ಪಡೆಯಬೇಕು.
  7. CSR ಕಾರ್ಯಕ್ರಮಗಳನ್ನು ಜಾರಿಗೊಳಿಸಲು ನೀಡಿರುವ ವ್ಯಕ್ತಿಗಳು/ಸಂಸ್ಥೆಗಳು CSR ಸಮಿತಿಯು ಉದ್ದೇಶಿಸಿರುವಂತೆ ಮುಂಗಡ ಪತ್ರದಲ್ಲಿ ಉಲ್ಲೇಖಿಸಿರುವಂತೆ ನಿಗಧಿಪಡಿಸಿರುವ ಮೊತ್ತದಲ್ಲಿ ಮತ್ತು ಕಾಲಮಿತಿಯಲ್ಲಿ ಜಾರಿಗೊಳಿಸಬೇಕು ಮತ್ತು ಅದನ್ನು CSR ಸಮಿತಿಗೆ ಅದರ ಪ್ರಗತಿಯ ಬಗ್ಗೆ CSR ಸಮಿತಿಯು ನಿರ್ದೇಶಿಸಿದ ಆವರ್ತನದಲ್ಲಿ ವರದಿ ಮಾಡಬೇಕು.
  8. ಯೋಜನೆಯ ಮೇಲ್ವಿಚಾರಣಾ ಘಟಕವು CSR ಕಾರ್ಯಕ್ರಮಗಳ ಜಾರಿಯ ಬಗ್ಗೆ ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲಿಸುತ್ತಿರಬೇಕು ಮತ್ತು ಕಾಲಕಾಲಕ್ಕೆ ಅವಶ್ಯಕ ಮಾರ್ಗದರ್ಶನವನ್ನು ನೀಡಬೇಕು ಮತ್ತು ಕಾರ್ಯನೀತಿಯಂತೆ CSR ಕಾರ್ಯಕ್ರಮಗಳು ಸಮರ್ಥವಾಗಿ ಜಾರಿಯಾಗುವುದನ್ನು ಗಮನಿಸಬೇಕು.
  9. ಪ್ರತಿ ಆರ್ಥಿಕ ವರ್ಷದ ಅಂತ್ಯದಲ್ಲಿ CSR ನ ವೆಚ್ಚದ ಕ್ರಮಬದ್ಧತೆಯು ಈ ಕೆಳಕಂಡಂತಿರುತ್ತದೆ:
  10. ಸಂಸ್ಥೆಗಳಿಗೆ ಯೋಜನೆಯನ್ನು ಪ್ರಾರಂಭಿಸುವ ಸಲುವಾಗಿ ಮುಂಗಡ ಪಾವತಿಯನ್ನು ಮುಂಗಡ ಹಣದಷ್ಟು ಮೊತ್ತಕ್ಕೆ ಬ್ಯಾಂಕ್ ಖಾತರಿಯನ್ನು ಪಡೆದ ನಂತರ ಪಾವತಿಸಬಹುದು. ನಂತರ ಕಂತುಗಳನ್ನು ಒಪ್ಪಿಕೊಂಡಿರುವ ಷರತ್ತುಗಳ ಅನ್ವಯ ಹಣ ವೆಚ್ಚ ಮಾಡಿದ ದೃಢೀಕರಣವನ್ನು CSR ಸಮಿತಿಯು ಪಡೆದು ವರ್ಗಾಯಿಸಬೇಕು. CSR ಸಮಿತಿಯು ಮುಂದಿನ ಕಂತುಗಳನ್ನು ಒಪ್ಪಿಕೊಂಡಿರುವ ಕಾಲಮಿತಿಯ ಯೋಜನೆಯ ಪ್ರಗತಿಯ ಪರಿಶೀಲನೆಯ ನಂತರ ಬಿಡುಗಡೆ ಮಾಡಬೇಕು.
  11. CSR ನಿಧಿಯ ನಿರ್ವಹಣೆ ಮತ್ತು ಇದರ ಪೂರ್ಣ ಜವಾಬ್ದಾರಿ ಈ ಯೋಜನೆಯ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಯದ್ದಾಗಿದ್ದು ಯೋಜನೆಯ ವೆಚ್ಚ ಮತ್ತು ಪ್ರಗತಿ ಕುರಿತು ಹಾಗೂ ಪ್ರತಿ ತಿಂಗಳು MIS(ಆಡಳಿತ ವರ್ಗದ ಮಾಹಿತಿ)ಗಳನ್ನು CSR ಸಮಿತಿಗೆ ವರದಿ ಸಲ್ಲಿಸಬೇಕು.
  12. ಕೆ.ಎಸ್.ಡಿ.ಎಲ್ ಸಂಸ್ಥೆಯು ಒದಗಿಸುವ ಮೊತ್ತಕ್ಕೆ ಸರಿ ಸಮನಾದ ವೆಚ್ಚವನ್ನು ಭರಿಸುವ ಅಧಿಕಾರವನ್ನು ಯೋಜನೆಯನ್ನು ಜಾರಿಗೊಳಿಸುವ ಪ್ರಾಧಿಕಾರಕ್ಕೆ ನೀಡಬೇಕು.
  13. ಕಾರ್ಯ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತಂತೆ ಇದನ್ನು 10 ಕೆಲಸದ ದಿನಗಳೊಗಾಗಿ CSR ಸಮಿತಿಯ ಶಿಫಾರಸ್ಸಿನ ನಂತರ ತಾತ್ವಿಕ ಒಪ್ಪಿಗೆಯನ್ನು ಕೆ.ಎಸ್.ಡಿ.ಎಲ್ ಸಂಸ್ಥೆಯ ಸಂಬಂಧಪಟ್ಟ ವಿಭಾಗಕ್ಕೆ ತಿಳಿಸಬೇಕು.
  14. CSR ಯೋಜನೆಯನ್ನು ಅನುಮತಿಸಿದ ನಂತರ ಕಂಪನಿಯು ಕೈಗೊಂಡಿರುವ CSR ಕಾರ್ಯಕ್ರಮಗಳ CSR ವೆಚ್ಚವನ್ನು ಅಂದರೆ, ಪ್ರತ್ಯಕ್ಷ ಮತ್ತು ಪರೋಕ್ಷ ವೆಚ್ಚವನ್ನು ಸೇರಿಸಬೇಕು. CSR ಕಾರ್ಯಕ್ರಮದಡಿಯಲ್ಲಿ ಯಾವುದೇ ಹೆಚ್ಚುವರಿ ಮೊತ್ತವಿದ್ದಲ್ಲಿ ಅದನ್ನು CSR ಗೆ ಸಂಬಂಧಿಸಿದ ವೆಚ್ಚಗಳಿಗೆ ಮಾತ್ರ ಉಪಯೋಗಿಸಬೇಕು. ಅದರಂತೆ, CSR ಕಾರ್ಯಕ್ರಮದಿಂದ ಯಾವುದೇ ಆದಾಯ ಉಂಟಾದರೆ ಅದನ್ನು CSR ವೆಚ್ಚವೆಂದು ತೋರಿಸಿ ಅದನ್ನು ವರದಿ ಮಾಡಬೇಕು.
  15. CSR ಯೋಜನೆ/ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಪ್ರಸ್ತಾವನೆ ಮತ್ತು ಅನುಮೋದನೆಯ ಬಗ್ಗೆ ಮಂಡಳಿಯ ಮಾರ್ಗಸೂಚಿಗಳು ( BOARD GUIDELINES FOR CONSIDERATION OF THE PROPOSAL AND APPROVAL OF CSR PROJECTS/PROGRAMMES AND ACTIVITIES ):
  16. ವೈಯಕ್ತಿಕ ಪ್ರಸ್ತಾವನೆಗಳು CSR ಯೋಜನೆ/ಕಾರ್ಯಕ್ರಮಗಳು/ಚಟುವಟಿಕೆಯ ಚೌಕಟ್ಟಿನ ಒಳಗಡೆ ಇರಬೇಕು.
  17. ಪ್ರತಿಯೊಂದು CSR ಪ್ರಸ್ತಾವನೆಯು ಯೋಜನಾಬದ್ಧವಾಗಿರಬೇಕು. ಇದರ ವಿಷಯದ ಬಗ್ಗೆ ಚಟುವಟಿಕೆ, ಕಾಲನಿರ್ಣಯ, ಆರ್ಥಿಕ ಅವಶ್ಯಕತೆ, ಸಂಸ್ಥೆಯ ಜವಾಬ್ದಾರಿ, ಪರಿಣಾಮ/ಅಪೇಕ್ಷಿತ ಫಲಿತಾಂಶ ಮತ್ತು ಸಮರ್ಥನೀಯ ಅಂಶಗಳನ್ನು ಪರಿಗಣಿಸಬೇಕು.
  18. ಸಮಗ್ರ CSR ನೀತಿಯಂತೆ ಪ್ರಸ್ತಾವನೆಯನ್ನು ಪರಿಗಣಿಸಲು ಮತ್ತು ಅನುಮೋದಿತ ಮೊತ್ತವನ್ನು ಬಿಡುಗಡೆ ಮಾಡಲು CSR ಸಮಿತಿಗೆ ಸೂಕ್ತ ಅಧಿಕಾರವನ್ನು ನೀಡಬೇಕು.
  19. ಹಂತ ಹಂತವಾಗಿ ಬಿಡುಗಡೆ ಮಾಡಬೇಕಾಗಿರುವ ಮೊತ್ತದ ಬಗ್ಗೆ ಪ್ರಸ್ತಾವನೆಯಲ್ಲಿ ತೋರಿಸಿರಬೇಕು ಮತ್ತು ಅದರ ಸರಿಯಾದ ಬಳಕೆ ಮತ್ತು ಕಾಲಮಿತಿಯಲ್ಲಿ ಅದರ ಪ್ರಗತಿಯ ಬಗ್ಗೆ ಭೌತಿಕ ಮತ್ತು ಆರ್ಥಿಕ ಕಾರ್ಯಕ್ರಮಗಳು/ ಯೋಜನೆಗಳು/ಚಟುವಟಿಕೆಗಳು ಎರಡೂ ರೀತಿಯಲ್ಲಿ ವರದಿಯನ್ನು ಮಂಡಿಸಬೇಕು.
  20. ಜಾರಿಗೊಳಿಸಬೇಕಾಗಿರುವ ಯೋಜನೆಯ ಕಾರ್ಯಕ್ರಮ/ಚಟುವಟಿಕೆಯ ಬಗ್ಗೆ ಬಿಡುಗಡೆ ಮಾಡಬೇಕಾಗಿರುವ ಹಣವನ್ನು ಹಂತ ಹಂತವಾಗಿ ಕಂತುಗಳಲ್ಲಿ ಪ್ರಾರಂಭಿಕವಾಗಿ ನಿರ್ದೇಶಕರ ಮಂಡಳಿಯು ಅನುಮೋದಿಸಿರುವ ಮೊತ್ತದ 1/3 ರಷ್ಟನ್ನು ವಿತರಣೆ ಮಾಡಬೇಕು.
  21. ಯೋಜನೆಯ ಪ್ರವರ್ತರಿಗೆ ಸಂಬಂಧಿಸಿದಂತೆ, ಶೇ.10 ರಷ್ಟು ಯೋಜನೆಯ ವೆಚ್ಚವನ್ನು ಜಾರಿ ಸಮಿತಿಯವರೇ ಭರಿಸಬೇಕು ಅಥವಾ ಬೆಂಬಲ ಯೋಜನೆಯನ್ನು CSR ನ KSDL ಅಡಿಯಲ್ಲಿ ಪರಿಶೀಲನೆ/ಅನುಮೋದನೆಗಾಗಿ ಕಳುಹಿಸಬೇಕು. ಆರೋಗ್ಯ ವಲಯದ ಯೋಜನೆ/ಕಾರ್ಯಕ್ರಮದ ಸಂಬಂಧದಲ್ಲಿ ಉದ್ಯೋಗಿ/ಅವಲಂಬಿತರಿಗೆ ಸೌಲಭ್ಯ ಕುರಿತಂತೆ ಇದರ ರಿಯಾಯಿತಿ ದರಗಳನ್ನು ತಿಳಿದುಕೊಳ್ಳಬೇಕು. ಅಗತ್ಯವಿದ್ದರೆ, ಅದರ ಬಳಕೆಯ ಬಗ್ಗೆ ಸಹ ತಿಳಿದುಕೊಳ್ಳಬೇಕು.
  22. ಮಂಜೂರಾತಿಯಂತೆ CSR ಯೋಜನೆಗಳನ್ನು ಜಾರಿಗೊಳಿಸಿದ ಸಂದರ್ಭದಲ್ಲಿ ಅನ್ವಯಿಸುವ ಕಡೆ ಕೆ.ಎಸ್.ಡಿ.ಎಲ್ ಸಂಸ್ಥೆಯ ಹೆಸರನ್ನು ಪ್ರದರ್ಶಿಸಬೇಕು ಮತ್ತು ಸಂಬಂಧಿಸಿದ ಯೋಜನೆಯ ಬಗ್ಗೆ ಅವಶ್ಯಕ ಫಲಕಗಳನ್ನು ಅಳವಡಿಸಬೇಕು.
  23. ಕಾರ್ಯಗತಗೊಳಿಸುವ ತಂತ್ರ (IMPLEMENTATION STRATEGY ):

CSR ಯೋಜನೆ / ಚಟುವಟಿಕೆಗಳನ್ನು ಈ ಕೆಳಕಂಡ ಮೂರು ರೀತಿಯಲ್ಲಿ ಕಾರ್ಯಗತಗೊಳಿಸಬೇಕು:

  1. ಕೆ.ಎಸ್.ಡಿ.ಎಲ್ ಸಂಸ್ಥೆಯಿಂದ ನೇರವಾಗಿ.
  2. ಎನ್‍ಜಿಒಗಳು/ಸ್ವಯಂ ಸೇವಾ ಸಂಸ್ಥೆಗಳು/ಟ್ರಸ್ಟ್‍ಗಳ ಮೂಲಕ.
  3. ಸಂಬಂಧಿಸಿದ ರಾಜ್ಯ/ಜಿಲ್ಲಾ ಪ್ರಾಧಿಕಾರಗಳ ಮೂಲಕ.
  4. ಲೆಕ್ಕ ಪರಿಶೋಧನೆ (AUDIT) :

ಯೋಜನೆಯ ಎಲ್ಲಾ ಚಟುವಟಿಕೆಗಳು ಮತ್ತು ಯೋಜನೆಯ/ಕಾರ್ಯಕ್ರಮದ ಅನುಷ್ಠಾನದಲ್ಲಿ ಕಂಪನಿಯ ವೆಚ್ಚದ ಬಗ್ಗೆ ಪ್ರತ್ಯೇಕ ಉಸ್ತುವಾರಿ ಸಮಿತಿಯಿಂದ ಸತತವಾಗಿ ಉಸ್ತುವಾರಿ ಮಾಡುವುದಲ್ಲದೇ ಅವುಗಳನ್ನು ಕಂಪನಿಯ ಲೆಕ್ಕ ಪರಿಶೋಧಕರಿಂದಲೂ ಸಹ ಪರಿಶೋಧನೆಗೆ ಒಳಪಡಿಸಬೇಕು.

  1. ಸಮಾರೋಪ (CONCLUSION):

ಮೇಲೆ ವಿವರಿಸಿರುವ CSR ಕಾರ್ಯನೀತಿಯು ಕೇವಲ ವಿವರಣಾತ್ಮಕ ಮಾತ್ರವಾಗಿರುತ್ತದೆ ಮತ್ತು ಕಾಲಕಾಲಕ್ಕೆ ಕಂಪನಿಯ ಕಾಯ್ದೆಯಂತೆ ಅವಶ್ಯಕವಾಗಿ ಅನ್ವಯವಾಗುವ ನಿಬಂಧನೆಗಳಿಗನುಗುಣವಾಗಿ ತಿದ್ದುಪಡಿ ಮಾಡಿ ಅದರಂತೆ ಕಾಲಕಾಲಕ್ಕೆ ನಿಯಮಗಳನ್ನು ರೂಪಿಸಬೇಕು.

ಇತ್ತೀಚಿನ ನವೀಕರಣ​ : 08-03-2021 11:32 AM ಅನುಮೋದಕರು: KSDL Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080